8-1-5119

ಬಂಧುಗಳೇ, ಕ್ರಿಶ್ಚಿಯನ್ ಕ್ಯಾಲೆಂಡರನ್ನು ಹಿಂದೂ ಮನೆಯಿಂದ ತೆಗೆಸುವ ತನಕ ಈ ಮಹಾಯಙ್ಞದಲ್ಲಿ 20,000 ಸಾವಿರಮನೆಗಳನ್ನು ತಲುಪಿದ್ದೇವೆ ಎಂದು ಹೇಳಲು ಹೆಮ್ಮಯಿದೆ. ಆದರೆ ಈ ಸಂಖ್ಯೆ ಕೇವಲ ಕನಿಷ್ಠವೆಂದು ನಮಗೆ ಅರಿವಿದೆ. ಮುಂದಿನ ಗುರಿ ದೊಡ್ಡದು ಗುಡ್ಡದಷ್ಟಿದೆ. ಹಾಗಾಗಿ ಆ ಗುರಿಯನ್ನು ತಲುಪಲು ಒಂದು ಪುಟ್ಟ ಹೆಜ್ಜೆಯನ್ನು ಇಟ್ಟಿದ್ದು ಇದಕ್ಕೆ ತಮ್ಮೆಲ್ಲರ ಪ್ರೇಮ, ಆಶೀರ್ವಾದ, ಸಹಾಯ ಮತ್ತು ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ರಾಮರಾಜ್ಯದ ಕನಸಕಂಡು ನಮಗೆ ಒಂದೊಂದೇ ಗುಲಾಮತೆಯಿಂದ ಹೊರಬಂದು ನಮ್ಮದೇ ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ತಿಳಿದೋ ತಿಳಿಯದೆಯೋ ನಾವು ಅನುಸರಿಸುತ್ತುತ್ತಿರುವ ಮೌಡ್ಯದಿಂದ ಹೊರಬರಬೇಕಾದ ಅನಿವಾರ್ಯತೆಯಿತೆ. ನಿಜ ಶತಶತಮಾನಗಳಿಂದ ರೂಡಿಸಿಕೊಂಡವುಗಳನ್ನು ಒಮ್ಮೆಯೇ ತೊಡೆದು ಹಾಕುವುದು ಕೊಂಚ ಕಷ್ಟ ಆದರೆ ಅಸಾಧ್ಯವಲ್ಲ. ಬಂಧಗಳೇ, ಧರ್ಮಜಾಗೃತಿ ಇಂದು ಹಲವು ಯೋಚನೆ, ಯೋಜನೆಗಳಿಗೆ ಚಾಲನೆ ನೀಡಲಿದೆ. ಹಿಂದಿನ ಹಲವು ಸಂತೋಷಗಳ ನೆನಪಿದೆ ಹಾಗೆಯೇ ಕಷ್ಟದ ದಿನಗಳೂ ಮರೆಯುವಂತಿಲ್ಲ. ಧಣಿವಾದಾಗ ಸುಧಾರಿಸಿಕೊಂಡು ಮತ್ತೆ ಹೊರಟಿದ್ದೇವೆ, ಆದರೆ ಪ್ರಯತ್ನಕ್ಕೆ ಎಂದೂವಿರಾಮವನ್ನು ನೀಡಿಲ್ಲ, ನೀಡಲೂ ಬಯಸುವುದಿಲ್ಲ. “ಕಷ್ಟದ ಸಮಯದಲ್ಲಿ ಕೈ ಹಿಡಿದವರ ಹಾಗು ಕಷ್ಟದ ಸಮಯದಲ್ಲಿ ಕೈಕೊಟ್ಟವರವರನ್ನು ಯಾವತ್ತು ಮರೆಯಬಾರದು” ಎಂಬ ಹಿರಿಯರ ಮಾತು ಸದಾ ನೆನಪಿಟ್ಟ ಈ ಹಾದಿಯಲ್ಲಿ ಸಾಗುತ್ತಿದ್ದೇನೆ. ಹಿಂದೂ ಕಾಲಚಕ್ರದಲ್ಲಿ ಪ್ರತಿದಿನ ಹೇಗೆ ಬದಲಾವಣೆಯಾಗುತ್ತದೆ, ಹೇಗೆ ನಮ್ಮ ಪೂರ್ವಿಕರ ಚಿಂತನೆಯಿತ್ತು ಎಂಬುದನ್ನು ಆಗಾಗ್ಗೆ ಕಲಿಸುವಂತಹಾ ಕಾರ್ಯ ಪ್ರತಿದಿನ ನಿಮ್ಮೆದುರು ಬಿತ್ತರಿಸಬೇಕೆಂಬ ಸಂಕಲ್ಪ ನಮ್ಮದು. ಈ ನಶ್ವರ ದೇಹದಲ್ಲಿ ಚೇತನವಿರುವವರೆಗೆ ಈ ಅಶ್ವಮೇಧಯಾಗ ನಡೆಯಲಿದೆ. ಎಂದಿನಂತೆ ಭಗವಂತನ ಆಶೀರ್ವಾದ ಜೊತೆಗೆ ನಿಮ್ಮ ಸ್ನೇಹ, ಪ್ರೇಮ, ಸಹಕಾರದ ನಿರೀಕ್ಷೆಯಲ್ಲಿ.. . .
ನಿಮ್ಮ ಪ್ರಸನ್ನ ಧರ್ಮಜಾಗೃತಿ
facebook.com/HinduKaalachakra
ಇಂದಿನ ಪಂಚಾಂಗ
ಕಲಿಯುಗ ವರ್ಷ -5119
ಅಯನ – ಉತ್ತರಾಯನ
ಋತು – ವಸಂತ
ಮಾಸ – ಚೈತ್ರ
ಪಕ್ಷ – ಶುಕ್ಲ
ವಾರ – ಬುಧವಾರ
ತಿಥಿ – ನವಮಿ
ನಕ್ಷತ್ರ – ಪುಷ್ಯ
ಯೋಗ – ಸುಕರ್ಮ
ಕರಣ – ಕೌಲವ
ಹಿಂದೂದಿನ: 8-1-5119
ಕ್ರಿಶ್ಚಿಯನ್ ದಿನ:5-4-2017

hK

Advertisements