9-1-5119

ಬಂಧುಗಳೇ, ನಾವು ಕ್ರಿಶ್ಚಿಯನ್ ಕ್ಯಾಲೆಂಡರ್ರಿನ ಮೌಡ್ಯ ನಮ್ಮನ್ನು ತಿಳಿಯದಂತೆ ಆವರಿಸಿದೆ, ಆದರೆ ನಮ್ಮ ಸಂಸ್ಕೃತಿ, ನಮ್ಮ ಬೇರು, ನಮ್ಮ ಹಿಂದುತ್ವ ಹೇಗಿದೆಯೆಂದರೆ ಅದೂಸಹ ನಮಗೇ ತಿಳಿಯದಂತೆ ನಮ್ಮಲ್ಲಿ ಆವರಿಸಿಕೊಂಡಿದೆ. ಅದು ಹೇಗೆ ಅಂತಿರಾ ? ಮದುವೆಯ ಸಂದರ್ಭದಲ್ಲಿ ಲಗ್ನ ಪತ್ರಿಕೆಯಲ್ಲಿ ಸ್ಪಷ್ಟವಾಗಿ ಪಂಚಾಂಗದ ಪ್ರಕಾರ ಯಾವ ದಿನದಂದು ವಿವಾಹ ಜರುಗಲಿದೆ ಅಂದರೆ ಪಂಚಾಂಗದ ಪ್ರಕಾರ ಯಾವ ಮಾಸ?, ಯಾವ ಪಕ್ಷ? ಯಾವ ತಿಥಿ?ಯಂದು ವಿವಾಹವಾಗಲಿದೆಯೆಂದು ಸ್ಪಷ್ಟವಾಗಿ ನಾವೇ ಉಲ್ಲೇಖಿಸುತ್ತೇವೆ ಆದರೆ ವಿವಾಹ ವಾರ್ಷಿಕೋತ್ಸವವನ್ನು ಮಾತ್ರ ವಿವಾಹ ಯಾವ ಕ್ರಿಶ್ಚಿಯನ್ನ್ ದಿನಾಂಕದಂದು ಆಯಿತು ಎಂಬುದನ್ನು ಮಾತ್ರ ಙ್ಞಾಪಕವಿಟ್ಟುಕೊಂಡು ಅಂದು ಆಚರಿಸುತ್ತೇವೆ. ನಿಮಗೆ ಉದಾಹರಣೆ ಸಹಿತ ವಿವರವಾಗಿ ಹೇಳಬೇಕೆಂದರೆ ಹೀಗ್ಗೆ 5 ವರ್ಷದಕೆಳಗೆ ಚೈತ್ರ ಮಾಸದ ಶುಕ್ಲ ಪಕ್ಷದ ದಶಮಿಯಯಂದು ನನ್ನ ಮದುವೆಯಾಯಿತು ಅಂದು ಕ್ರಿಶ್ಚಿಯನ್ನ ಕ್ಯಾಲೆಂಡರಿನ ಪ್ರಕಾರ 15-04-2012 ಅಂದರೆ ಪಂಚಾಂಗದ ಪ್ರಕಾರ ಆ ದಿನ ಇವತ್ತು, ಕ್ರಿಶ್ಚಿಯನ್ ದಿನಾಂಕ: 15-04-2017(ಇದೇ ತಿಂಗಳ 15ಕ್ಕೆ). ಹೀಗಾಗಿ ಇಂದು ನಾನು ಪಂಚಾಂಗದ ಪ್ರಕಾರ ವಿವಾಹದ 5ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದೇನೆ.
facebook.com/DharmaJagruthiKA
ಇದೇ ವಿಚಾರ ಹುಟ್ಟಿದ ದಿನಾಂಕದಲ್ಲೂ ಆಗುತ್ತದೆ, ಮಗುಹುಟ್ಟಿದ ಬಳಿಕ ಶಾಸ್ತ್ರಿಗಳ ಬಳಿಹೋಗಿ ಕುಂಡಲಿ ಬರೆಸುವಾಗಿನ ಮುತುವರ್ಜಿ ಆ ಮಗುವಿನ ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಲುವಾಗ ಮರೆಯುವಂತದ್ದು ಮಾತ್ರ ಹಿಂದೂಧರ್ಮದ ದೊಡ್ಡ ದುರಂತವೇ ಸರಿ. ತಪ್ಪು ಮಾಡುತ್ತಿದ್ದೇವೆ ಅಂತ ಅಲ್ಲ ಅದರ ಅರಿವು ನಮಗಿರುವುದಿಲ್ಲ ಅಷ್ಟೆ ಅಥವಾ ಪಂಚಾಂಗದಲ್ಲಿಯ ಕನಿಷ್ಠ ಙ್ಞಾನವಿಲ್ಲದಿರುವುದೂ ಸಹ ಅದಕ್ಕೆ ಕಾರಣ ಅಥವಾ ಒಂದು ವೇಳೆ ಈ ಎಲ್ಲಾ ಮಾಹಿತಿಗಳು ಗೊತ್ತಿದ್ದರೂ ನನ್ನಬನಿಂದ ಏನು ಆಗುತ್ತದೆಂದು ಮತ್ತೆ ಕ್ರಿಶ್ಚಿಯನ್ ಕ್ಯಾಲೆಂಡರಿನ ದಿನಾಂಕದ ಪ್ರಕಾರವೇ ಆಚಾರಿಸಿಕೊಳ್ಳುತ್ತೇವೆ.
faebook.com/DharmaJagruthiKA
ಬಂಧುಗಳೇ, ನಮ್ಮ ಈ ಮೌಡ್ಯ, ಅಙ್ಞಾನ, ನಿರ್ಲಕ್ಯದಿಂದಾಗಿಯೇ ನಾವಿನ್ನೂ ಕ್ರಿಶ್ಚಿಯನ್ನ್ ಕ್ಯಾಲೆಂಡರಿನ ಗುಲಾಮಿತನದಿಂದ ಹೊರಬರಲಾಗುತ್ತಿಲ್ಲ. ಎಚ್ಚೆತ್ತು ಕೊಳ್ಳಿ ಎಚ್ಚೆತ್ತು ಕೊಳ್ಳಿ ಎಚ್ಚೆತ್ತು ಕೊಳ್ಳಿ. ಕ್ರಿಶ್ಚಿಯನ್ನ ಕ್ಯಾಲೆಂಡರಿನ ಆಉಸ್ಸು ಕೇವಲ 2017 ವರ್ಷ ಮಾತ್ರ ಆದರೆ ನಮ್ಮದು 1955885119 ವರ್ಷಗಳು. ಬರೀ ಕಲಿಯುಗದ್ದೇ ತೆಗೊಂಡರೆ 5119 ವರ್ಷಗಳು. ನಾವು ಯಾರೆದು ನಮಗೇ ಅರಿವಿಲ್ಲ, ನಮ್ಮ ಶ್ರೇಷ್ಠತೆಯ ಙ್ಞಾನ ನಮಗಿಲ್ಲ. ನಮ್ಮ ಪಂಚಾಂಗ ಮಾಹಿತಿ ನಮಗಿಲ್ಲ, ಬಂಧುಗಳೇ, ನಾವು ಹಿಂದುವಾಗಿ ನಮ್ಮ ಮನೆಯಲ್ಲಿ ಕ್ರಿಶ್ಚಿಯನ್ ಧರ್ಮದ ಕುರುಹಾದ ಕ್ಯಾಲೆಂಡರ ಇರುವುದು ಎಷ್ಟು ಸರಿ. ಹಾಗಾಗಿ “ಹಿಂದೂಕಾಲಚಕ್ರ”ವೆಂಬ ಮಹಾಯಾಗ, ಹಿಂದೂ ಮನೆಗಳಿಂದ ಕ್ರಿಶ್ಚಿಯನ್ ಕ್ಯಾಲೆಂಡರ್ ತೆಗೆಸುವವರೆಗೆ ಅಶ್ಚಮೇಧ. ನಮ್ಮದೊಂದು ಸಣ್ಣ ವಿನಂತಿ ದಯವಿಟ್ಟು ಈಗಲಾದರೂ ಒಮ್ಮೆ ನಿಮ್ಮ ಮದುವೆಯ ಕಾರ್ಡನ್ನು ಒಮ್ಮೆ ನೋಡಿ ಅಲ್ಲಿ ನಾನು ಮೇಲೆ ಹೇಳಿದ ಮಾಸದ, ಪಕ್ಷದ ಮತ್ತು ತಿಥಿಯ ವಿವರಣೆಯಿರುತ್ತೆ ಅಂದೇ ವಿವಾಹ ವಾರ್ಷಿಕೋತ್ಸವವನ್ನು ಸ್ಮರಿಸಿಕೊಳ್ಳಿ. ಹಾಗೆ ನಿಮ್ಮ, ನಿಮ್ಮ ಮಕ್ಕಳ ಜಾತಕ/ಕುಂಡಲಿಯನ್ನು ಸೂಕ್ಷಗಮನಿಸಿ ಅಲ್ಲಿಯೂ ಸಹ ಮಾಸದ, ಪಕ್ಷದ, ತಿಥಿಯ ವಿವರಣೆಯಿರುತ್ತದೆ ಅದರಂತೇ ಹುಟ್ಟಿದ ಹಬ್ಬವನ್ನು ಆಚರಿಕೊಳ್ಳಿ ಅಥವಾ ಆಚರಿಸಿ. ಒಟ್ಟಾಗಿ ಕ್ರಿಶ್ಚಿಯನ್ ಕ್ಯಾಲೆಂಡರಿನ ಮಾನಸಿಕ ಮೌಡ್ಯದಿಂದ ಹೊರಬರೋಣ. ಕೊನೆಯದಾಗಿ ಸಣ್ಣ ವಿನಂತಿ ನಿಮ್ಮ ಅಥವಾ ನಿಮ್ಮ ಮಕ್ಕಳ ಜಾತಕವಿಲ್ಲ, ನಮಗೆ ಪಂಚಾಂಗದ ಪ್ರಕಾರ ಯಾವ ಮಾಸ, ಪಕ್ಷ ತಿಥಿಯ ಮಾಹಿತಿ ಅಗತ್ಯವೆದೆಯೆಂದರೆ ದಯವಿಟ್ಟು ನಿಮ್ಮ ಹತ್ತಿರದ ಪಂಚಾಂಗ ತಙ್ಞರನ್ನು ಸಂಪರ್ಕಿಸಿ. ಅಥವಾ ನಮ್ಮ “ಹಿಂದೂಕಾಲಚಕ್ರ”ದ e-mail ವಿಳಾಸ hindukaalachakra@gmail.com ಗೆ ಹುಟ್ಟಿದ ದಿನಾಂಕ, ಸಮಯ ಮತ್ತು ನಿಮ್ಮ ವಿಳಾಸವನ್ನು ತಿಳಿಸಿ ನಾವು ಆ ಮಾಹಿತಿಯನ್ನು ನೀಡುವ ಸಮಯದ ಪರಿಧಿಯಲ್ಲಿ ಸಂಪೂರ್ಣ ಪ್ರಯತ್ನ ಮಾಡುತ್ತೇನೆ.
-ಪ್ರಸನ್ನ ಧರ್ಮಜಾಗೃತಿ
“ಹಿಂದೂಕಾಲಚಕ್ರ”ದ ಅಧಿಕೃತ ಪೇಜ್ facebook.com/HinduKaalachakra ಕ್ಕೆಕ್ಕೊಂದು Likeಕೊಟ್ಟು. ಮೇಲಿನ ವಿಚಾರವನ್ನು ಸಾಧ್ಯವಾದಷ್ಟು ಷೇರ್ ಮಾಡಿ. ಆದಷ್ಟು ಬೇಗ ಹಿಂದೂ ಮನೆಗಳನ್ನು ಕ್ರಿಶ್ಚಿಯನ್ನ ಕ್ಯಾಲೆಂಡರ್ ಮುಕ್ತ ಮಾಡೋಣ.
ಇಂದಿನ ಪಂಚಾಂಗ:
ಕಲಿಯುಗ ವರ್ಷ -5119
ಅಯನ – ಉತ್ತರಾಯನ
ಋತು – ವಸಂತ
ಮಾಸ – ಚೈತ್ರ
ಪಕ್ಷ – ಶುಕ್ಲ
ವಾರ – ಗುರುವಾರ
ತಿಥಿ – ದಶಮಿ
ನಕ್ಷತ್ರ – ಆಷ್ಲೇಶ
ಯೋಗ – ದೃತಿ
ಕರಣ – ಗರಜ
ಹಿಂದೂದಿನ: 9-1-5119
ಕ್ರಿಶ್ಚಿಯನ್ ದಿನ: 6-4-2017
915119

Advertisements